ಜಪಾನೀ ಭಾಷೆ
 ಎಲ್ಲ ಜಪಾನಿಗಳೂ ಐನುಗಳೂ ಕೊರಿಯ ಹಾಗೂ ಫಾರ್ಮೋಸಗಳಲ್ಲಿನ ಕೆಲ ಜನರೂ, ಮತ್ತು ಹವಾಯಿ ದ್ವೀಪಗಳು ದಕ್ಷಿಣ ಅಮೆರಿಕ
(ವ್ಯಂಜನಗಳು. ಯ್ ಮ್ ಎಂಬವು ಅರ್ಧ ಸ್ವರಗಳು)

(ಕ್)
(ಸ್)
(ಟ್)
(ನ್)
(ಹ್)
(ಮ್)
(ಯ್)
(ರ್)
(ಪ್)

(ಎ)ಅ
ಕ
ಸ
ಟ
ನ
ಹ
ಮ
ಯ
ರ
ವ

(ಐ)ಇ
ಕಿ
ಸಿ(ಷಿ)
ಟಿ(ಷಿ)
ನಿ
ಹಿ
ಮಿ
ಯಿ(ಇ)
ರಿ
ವಿ(ಇ)

(ಯು)ಉ
ಕು
ಸು
ಟು(ಟ್ಸು)
ನು
ಹು(ಫು)
ಮು
ಯು
ರು
ವು(ಉ)

(ಇ)ಎ
ಕೆ
ಸೆ
ಟೆ
ನೆ
ಹೆ
ಮೆ
ಯೆ(ಎ)
ರೆ
ವೆ(ಎ)

(ಒ)ಒ
ಕೊ
ಸೊ
ಟೊ
ನೊ
ಹೊ
ಮೊ
ಯೊ
ರೊ
ವೊ(ಒ)

ಮತ್ತು ಇತರ ಕಡೆಗಳಿಗೆ ವಲಸೆ ಹೋಗಿ ನಿಂತಿರುವ ಜಪಾನಿಗಳೂ ಆಡುವ ಭಾಷೆ. ಇದರಲ್ಲಿ ಪ್ರಾದೇಶಿಕ ಉಪ ಭಾಷೆಗಳನ್ನು ಗುರುತಿಸಬಹುದಾದರೂ ಟೋಕಿಯೊ ಪ್ರಾಂತ್ಯದಲ್ಲಿ ಜನರಾಡುವ ಮಾತಿನ ನೆಲಗಟ್ಟಿನಲ್ಲಿ ಬೆಳೆದ ಚೊಕ್ಕ ಜಪಾನೀ ಭಾಷೆ ಆ ದೇಶದ ಎಲ್ಲ ಕಡೆಯವರಿಗೂ ತಿಳಿಯುತ್ತದೆ. ಜಪಾನೀ ಭಾಷೆ ಅನ್ಯಸಂಪರ್ಕವಿಲ್ಲದ ಭಾಷೆ ಎಂಬುದು ಅಂಗೀಕೃತವಾದ ವಿಷಯ. ಈ ಭಾಷೆ ಮತ್ತಾವುದಾದರೂ ಭಾಷೆಗಳ ಪೀಳಿಗೆಯೊಂದಿಗೆ ಸಂಬಂಧ ಹೊಂದಿದೆಯೆ ಎಂಬ ಅಂಶವನ್ನು ಇದುವರೆಗೂ ಯಾರೂ ನಿಖರವಾಗಿ ನಿರ್ಣಯಿಸಿಲ್ಲ.

ಜಪಾನಿ ಭಾಷೆಯಲ್ಲಿನ ಸ್ವರ, ಅರ್ಧಸ್ವರ ಮತ್ತು ವ್ಯಂಜನಗಳ ಉಚ್ಚಾರಣೆಯಲ್ಲಿ ವ್ಯತ್ಯಾಸಗಳುಂಟು. ಆದರೆ ಅರ್ಧಸ್ವರ ಮತ್ತು ವ್ಯಂಜನಗಳ ಉಚ್ಚಾರಣೆ ಯಾವಾಗಲೂ ಸ್ವರಗಳೊಡನೆ ಕೂಡಿಯೇ ಇರುತ್ತವೆ. ಈ ಸಂಯೋಜನೆಗಳು ಕಾನ ವರ್ಣಮಾಲೆ ಅಥವಾ ಹಿಯಾನ್ ಕಾಲದಲ್ಲಿ ನಿರ್ಮಿತವಾದ ಐವತ್ತು ಅಕ್ಷರಗಳ ಮಾಲಿಕೆಯಲ್ಲಿ ಉದಾಹೃತವಾಗಿವೆ.
ಅನೇಕ ಅರ್ಧಸ್ವರ ಮತ್ತು ಸ್ವರಗಳ ಧ್ವನಿಗಳೀಗ ಲುಪ್ತವಾಗಿವೆ; ಯ, ವು, ಯೊ, ಮತ್ತು ವ ಇವು ಮಾತ್ರ ಯಾವ ಬದಲಾವಣೆಯೂ ಇಲ್ಲದೆ ಉಳಿದಿವೆ. ಸಿ, ಟಿ, ಟು, ಮತ್ತು ಹು ಇವುಗಳ ಉಚ್ಚಾರಣೆ ಷಿ, ಚಿ, ಟ್ಸು ಮತ್ತು ಫು ಎಂಬುದಾಗಿ ದೀರ್ಘ ಕಾಲಾವಧಿಯಲ್ಲಿ ಬದಲಾವಣೆ ಹೊಂದಿದೆ. ಮೇಲಿನ ಪಟ್ಟಿಯಲ್ಲಿ ನಿರ್ದೇಶಿಸುವ ಏಳು ಮಹಾಪ್ರಾಣಗಳ ಜೊತೆಗೆ ಗ್(g), ಸ್û(z), ಡ್(ಜ), ಬ್(b), ಪ್(ಠಿ) ಎಂಬ ಅಲ್ಪ ಪ್ರಾಣಗಳೂ ಸ್ವರಗಳೊಡನೆ ಮೇಲೆ ಹೇಳಿದ ರೀತಿಯಲ್ಲೇ ಸಂಯೋಜಿತವಾಗಿ ಕ್ಯ, ಕ್ಯು, ಕ್ಯೊ ಮುಂತಾದ ಉಚ್ಚಾರಣೆಗಳಿಗೆ ಎಡೆಗೊಡುತ್ತವೆ.
ಜಪಾನೀ ಭಾಷೆಯ ಮಾತುಗಳು (ನಾಮಪದ, ಸರ್ವನಾಮ, ಸಂಖ್ಯಾವಾಚಕ), ನಾಮವಾಚಕಗಳು, ಕ್ರಿಯಾವಾಚಕಗಳು (ಕ್ರಿಯಾಪದ), ಸಹಾಯಕ ಕ್ರಿಯಾಪದ, ವಿಶೇಷಣ ಮತ್ತು ವಿಶೇಷಣ ಕ್ರಿಯಾವಾಚಕಗಳು, ಅವ್ಯಯಗಳು (ಕ್ರಿಯಾ ವಿಶೇಷಣ, ಸಮುಚ್ಚಯವ್ಯಯ, ಭಾವಸೂಚಕಾವ್ಯಯಗಳು) ಮತ್ತು ಪ್ರತ್ಯಯಗಳು ಎಂಬುದಾಗಿ ವರ್ಗೀಕೃತವಾಗಿವೆ. ನಾಮಾದಿ ವಾಚಕಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಹಚ್ಚುವುದಿಲ್ಲ. ಅವುಗಳ ವಿಭಕ್ತಿಯನ್ನು ಪ್ರತ್ಯೇಕ ಪ್ರತ್ಯಯಗಳು ಸೂಚಿಸುತ್ತವೆ. ಪ್ರತ್ಯಯದ ಉಪಯೋಗ ಬಗೆಬಗೆಯಾಗಿದೆ. ಉದಾಹರಣೆಗಾಗಿ ಕೃದಂತ, ಸಂಭಾವನಾರ್ಥಕ ರೂಪ, ಸಂಯುಕ್ತವಾಕ್ಯ ಇತ್ಯಾದಿಗಳ ನಿರ್ಮಾಣಗಳನ್ನು ನೋಡಬಹುದು.

ಜಪಾನೀ ಭಾಷೆಗೆ ಕಟಿಕನ ಮತ್ತು ಹಿರಕನ ಎಂಬುದಾಗಿ ಎರಡು ತರದ ಲಿಪಿಗಳಿವೆ. ಇವೆರಡೂ ಹಿಂದಿನ ಕಾಲದಿಂದ ಜಪಾನೀ ಧ್ವನಿಗಳನ್ನು ಸಂಕೇತಿಸುವುದಕ್ಕೆ ಬಳಸಿಕೊಳ್ಳುತ್ತಿದ್ದ ಚೀನೀಲಿಪಿಗಳನ್ನು ಸರಳ ಮಾಡಿಕೊಂಡು ಹಿಯಾನ್ ಕಾಲದಲ್ಲೆ ನಿರ್ಮಾಣಗೊಂಡಂಥವು. ಜಪಾನೀ ಭಾಷೆ ತನ್ನ ಶಬ್ದ ಸಂಪತ್ತಿಯನ್ನು ಸಹಸ್ರಾರು ಚೀನೀ ಶಬ್ದಗಳಿಂದ ಹೆಚ್ಚಿಸಿಕೊಂಡಿದೆ. ಈ ಶಬ್ದಗಳ ಉಚ್ಚಾರಣೆ ಹಾನ್ ಅಥವಾ ವೂ ಅಥವಾ ಟಾಂಗ್ ವಂಶದವರ ಆಳ್ವಿಕೆಯ ಕಾಲದ ಚೀನೀ ಉಚ್ಚಾರಣೆಯಂತಿದೆ. ಈ ಶಬ್ದಗಳನ್ನು ಚೀನೀ ಲಿಪಿಯಲ್ಲಿ ಬರೆಯುತ್ತಾರೆ. ಚೀನಿ ಲಿಪಿಯಲ್ಲಿರುವ ಶಬ್ದಗಳನ್ನು ಜಪಾನೀ ಬಗೆಯಲ್ಲಿ ಉಚ್ಚರಿಸುವುದುಂಟು. ಈ ರೀತಿಯಲ್ಲಿ ಒಂದೇ ಲಿಪಿಗೆ ಆನ್ (ಚೀನೀ) ಮತ್ತು ಕೂನ್ (ಜಪಾನೀ) ಎಂಬ ಎರಡು ಬಗೆಯ ಉಚ್ಚಾರಣೆಗಳಿವೆ. ಆಧುನಿಕ ಯುಗದಲ್ಲಿ, ಐರೋಪ್ಯ ಪದಗಳಿಗೆ ಸಮಾನಾರ್ಥಕಗಳೆನಿಸುವ ಅನೇಕ ಹೊಸ ಪದಗಳ ಸೃಷ್ಟಿಯಾಗಿದೆ ಮತ್ತು ಅದೇ ಸಮಯದಲ್ಲಿ ಜಪಾನೀಗೆ ಹೊಂದುವಣೆ ಮಾಡಿಕೊಂಡ ಅನೇಕ ಐರೋಪ್ಯ ಶಬ್ದಗಳೂ ಜಪಾನೀ ಶಬ್ದಭಂಡಾರವನ್ನು ಹೊಕ್ಕಿವೆ. ಈಗಿನ ಕಾಲದಲ್ಲಿ ಚೊಕ್ಕ ಜಪಾನೀ ಭಾಷೆಯನ್ನು ಬರೆಯುವಾಗ, ಹಿರಕನ ಲಿಪಿಯೊಂದಿಗೆ ಚೀನೀ ಲಿಪಿಯನ್ನು ಬೆರಸಿ ಬರೆಯುವುದು ವಾಡಿಕೆ; ಐರೋಪ್ಯ ಶಬ್ದಗಳ ಜಪಾನೀ ರೂಪಗಳನ್ನಾಗಲೀ ಅಥವಾ ಅವುಗಳ ಮೂಲಕ ಉಚ್ಚಾರಣೆಯ ರೂಪವನ್ನಾಗಲಿ ಲೇಖಿಸುವಾಗ ಕಟಿಕನ ಲಿಪಿಗಳು ಉಪಯೋಗಿಸಲ್ಪಡುತ್ತವೆ.
(ಎಂ.ಎಚ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ